Surprise Me!

ಮಧ್ಯರಾತ್ರಿ ಮಂಗಳೂರಿಗೆ ಬಂದು ತಂಗಿದ ನರೇಂದ್ರ ಮೋದಿ | Oneindia Kannada

2017-12-19 1,344 Dailymotion

Prime minister Narendra Modi has had breakfast today in mangaluru, then he will leave to Lakshadweep from Mangaluru Airport for visits Ockhi cyclone affected area.

ಲಕ್ಷದ್ವೀಪಕ್ಕೆ ತೆರಳಲೆಂದು ಸೋಮವಾರ ರಾತ್ರಿ ಮಂಗಳೂರಿನಲ್ಲಿ ತಂಗಿದ್ದ ಪ್ರಧಾನಿ ನರೇಂಧ್ರ ಮೋದಿ, ಇಂದು ಬೆಳಗ್ಗೆ (ಮಂಗಳವಾರ) ಕರಾವಳಿಯ ತಿಂಡಿ ರುಚಿ ಸವಿದರು.ಇಂದು ಮುಂಜಾನೆ 3 ಗಂಟೆಗೆ ಎದ್ದು ಯೋಗಭ್ಯಾಸ ಮಾಡಿ ಬಳಿಕ ನೀರುದೋಸೆ,ಮೂಡೆ, ಅವಲಕ್ಕಿ ಉಪ್ಪಿಟ್ಟು ಸವಿದರು. ಮೂಡೆ ಬಗ್ಗೆ ವಿಚಾರಿಸಿ ಅದರ ರುಚಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಮೋದಿ 2 ಬಾರಿ ಮೂಡೆ ಹಾಕಿಸಿಕೊಂಡು ಚಪ್ಪರಿಸಿದರು. ನಂತರ ತಿಂಡಿ ಬಡಿಸಿದವರಿಗೆ ಮೋದಿ ಪ್ರಶಂಸಿದರು.ಇನ್ನು ನಂತರ ತಮಗೆ ಮುಂಜಾನೆಯ ಉಪಹಾರ ನೀಡಿದ ನಗರದ ಓಷಿಯನ್ ಪರ್ಲ್ ಹೋಟೆಲ್ ಸಿಬ್ಬಂದಿ ಜೊತೆ ಪೋಟೋ ತೆಗಿಸಿಕೊಂಡು ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾಯುಪಡೆಯ ವಿಮಾನದ ಮೂಲಕ ಲಕ್ಷದ್ವೀಪಕ್ಕೆ ಪ್ರಯಾಣ ಬೇಳೆಸಿದರು. ಓಖಿ ಚಂಡಮಾರುತದಿಂದ ತತ್ತರಿಸಿರುವ ಲಕ್ಷದ್ವೀಪದ ಪ್ರದೇಶಗಳ ಪರಿಶೀಲನೆ ನಡೆಸಲಿದ್ದಾರೆ.ಗುಜರಾತ್ ಹಾಗು ಹಿಮಾಚಲ ಪ್ರದೇಶದ ಗೆಲುವಿನ ಖುಷಿಯಲ್ಲಿದ್ದ ಮೋದಿ ಅವರನ್ನು ಸೋಮವಾರ ರಾತ್ರಿ ಸುಮಾರು 11:40 ಕ್ಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ಸ್ವಾಗತಿಸಿದ್ದರು.